ಇಂಡಿಯನ್ ಆನ್ಸಾಂಬಲ್ ತಂಡದ ರಂಗ ತರಬೇತಿ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳಿಗೆ ಆಹ್ವಾನ

ಇಂಡಿಯನ್ ಆನ್ಸಾಂಬಲ್ ತಂಡದ ರಂಗ ತರಬೇತಿ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳಿಗೆ ಆಹ್ವಾನ


ಇಂಡಿಯನ್ ಆನ್ಸಾಂಬಲ್ ತಂಡವು ತನ್ನ ರಂಗ ತರಬೇತಿ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಅಭ್ಯರ್ಥಿಗಳನ್ನು ಆಹ್ವಾನಿಸುತ್ತಿದೆ.

ಇಂಡಿಯನ್ ಆನ್ಸಾಂಬಲ್ ನ ರಂಗ ತರಬೇತಿ ಕಾರ್ಯಕ್ರಮವು ಒಂದು ವಿಶದವಾದ ಕಾರ್ಯಕ್ರಮವಾಗಿದ್ದು, ಅಭ್ಯರ್ಥಿಗಳಿಗೆ ತಮ್ಮ ಕ್ರಿಯಾಶೀಲತೆಯ ಸೆಲೆಯನ್ನು

ಕಂಡುಕೊಳ್ಳುವಲ್ಲಿ ಮತ್ತು ಅದನ್ನು ರಂಗ ಪ್ರಯೋಗವನ್ನಾಗಿ ರೂಪಿಸುವಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.

ಅಭ್ಯರ್ಥಿಗಳು ನಟನೆ, ಲೇಖನ ಮತ್ತು ನಿರ್ದೇಶನದಲ್ಲಿ ತರಬೇತಿ ಪಡೆಯುತ್ತಾರೆ ಹಾಗು ತಮ್ಮದೇ ಆದ ರಂಗಭೂಮಿಯನ್ನು ಕಂಡುಕೊಳ್ಳುವಲ್ಲಿ ಮತ್ತು ರೂಪಿಸುವಲ್ಲಿ ತೊಡಗುತ್ತಾರೆ

ತರಬೇತಿ ಕಾರ್ಯಕ್ರಮವು ಹತ್ತು ತಿಂಗಳುಗಳ ಅವಧಿಯದ್ದಾಗಿದ್ದು, ವಾರಕ್ಕೆ ಎರಡು ತರಗತಿಗಳಿರುತ್ತದೆ.

ತರಗತಿಗಳ

ಹೊರತಾಗಿ ಅಭ್ಯರ್ಥಿಗಳು ವಾರಕ್ಕೆ ಸುಮಾರು ಆರು ಘಂಟೆಗಳನ್ನು ಅಭ್ಯಾಸದಲ್ಲಿ ತೊಡಗಿಸಬೇಕಾಗುತ್ತದೆ.

ಕಾರ್ಯಕ್ರಮವು ಯಾವುದೇ ಭಾಷೆಗೆ ಸೀಮಿತವಾಗಿರುವುದಿಲ್ಲ, ಮತ್ತು  ಅಭ್ಯರ್ಥಿಗಳು ತಮ್ಮ ಮಾತೃ ಭಾಷೆಯಲ್ಲಿ ಪ್ರಯೋಗಗಳನ್ನು ರೂಪಿಸುವಂತೆ ಪ್ರೋತ್ಸಾಹಿಸಲಾಗುತ್ತದೆ.

ಆಸಕ್ತರಿಗೆ ರಂಗಭೂಮಿಯಲ್ಲಿ ಪೂರ್ವ ಅನುಭವವಿರಬೇಕಾಗಿಲ್ಲ. ರಂಗಭೂಮಿ ಮತ್ತು ಇತರ ಕಲೆಗಳಲ್ಲಿ ಆಸಕ್ತಿಯಿದ್ದು, ತರಗತಿಗಳಿಗೆ (ಸಮಯಕ್ಕೆ ಸರಿಯಾಗಿ) ಹಾಜರಾಗುವ

ಮತ್ತು ಇಂತಿಷ್ಟು ಅಭ್ಯಾಸ ಸಮಯವನ್ನು ವಿನಿಯೋಗಿಸುವ ಜವಾಬ್ದಾರಿ ಇರುತ್ತದೆ.

ಶುಲ್ಕದ ವಿವರ: ಕಾರ್ಯಕ್ರಮದ ಸಲುವಾಗಿ ಅಭ್ಯರ್ಥಿಗಳು ತಮ್ಮ ಸಂದರ್ಭಕ್ಕನುಗುಣವಾಗಿ ರೂ. ೦ / 5೦೦ / 1೦೦೦ಗಳನ್ನು ಪ್ರತಿ ತಿಂಗಳು ಪಾವತಿಸಬಹುದು.

ಈ ಕಾರ್ಯಕ್ರಮವು 2010, ಸೆಪ್ಟೆಂಬರ್ ನ ಮೊದಲ ವಾರ ಶುರುವಾಗಲಿದ್ದು, ತರಗತಿಗಳು ಬನ್ನೇರುಘಟ್ಟ ರಸ್ತೆಯ ಐ.ಐ.ಎಂ.ಬಿ.ಯ ಹಿಂಭಾಗದಲ್ಲಿರುವ “ರಂಗಮಡು”ವಿನಲ್ಲಿ ನಡೆಯುತ್ತದೆ.

ಆಸಕ್ತರು indianensemble@gmail.com ಇಲ್ಲಿಗೆ ಈ-ಮೇಲ್ ಮೂಲಕ ಅಥವಾ ಶ್ರೀಕಾಂತ್ ರನ್ನು 99861 46506 ಈ ಸಂಖ್ಯೆಯಲ್ಲಿ ಫೋನ್ ಮೂಲಕ ಸಂಪರ್ಕಿಸಬೇಕಾಗಿ ವಿನಂತಿ.

https://indianensembletheatre.wordpress.com/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: